ಸಂಜನ ಸಿನಿ ಆರ್ಟ್ಸ್ ಲಾಂಛನದಲ್ಲಿ ಎಸ್.ಹೆಚ್.ವಾಲ್ಕೆ ಅವರು ನಿರ್ಮಿಸುತ್ತಿರುವ ‘ಲೋಕಲ್ ಟ್ರೈನ್ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ‘ಸನಿಹ ಸನಿಹ ನೋಡುತ್ತಿದ್ದರೆ ನೀನು ನೋಡುತ್ತಿದ್ದರೆ ಎಂಬ ಹಾಡಿನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ನಲ್ಲಿ ನಡೆದಿದೆ. ಮದರಂಗಿ ಕೃಷ್ಣ ಹಾಗೂ ಎಸ್ಟರ್ ನರೋನ ಅಭಿನಯಿಸಿದ ಈ ಹಾಡಿಗೆ ಚಿನ್ನಿಪ್ರಕಾಶ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಎನ್.ರುದ್ರಮುನಿ ‘ಲೋಕಲ್ ಟ್ರೈನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜಯಂತ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್ ಬರೆದಿರುವ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂಭಾಷಣೆಯನ್ನು ಕೇಶವಾದಿತ್ಯ ಬರೆದಿದ್ದಾರೆ. ರಮೇಶ್ಬಾಬು ಛಾಯಾಗ್ರಹಣ, ಪಿ.ಆರ್,ಸೌಂದರ್ ರಾಜ್ ಸಂಕಲನ, ರಾಮ್ ಶೆಟ್ಟಿ, ರಮೇಶ್ ಸಾಹಸ ನಿರ್ದೇಶನ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಹಾಗೂ ಈಶ್ವರಿ ಕುಮಾರ್ ಕಲಾ ನಿರ್ದೇಶನ ‘ಲೋಕಲ್ ಟ್ರೈನ್ ಚಿತ್ರಕ್ಕಿದೆ. ಮದರಂಗಿ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ಟರ್ ನರೋನ, ಲೋಕೇಶ್(ಭಜರಂಗಿ), ಸುಚೀಂದ್ರಪ್ರಸಾದ್, ರೇಖಾ ಕುಮಾರ್, ಸಂದೀಪ, ಚಂದ್ರಶೇಖರ್, ಸುಮಿತ್ರ, ಪೆಟ್ರೊಲ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.